ಕೊಟ್ಟೂರು ಕೆರೆಗೆ ನೀರು ತುಂಬಿಸಲು ಸಿ.ಎಂ.ಸಕಾರಾತ್ಮಕ ಒಪ್ಪಿಗೆ : ಕೆ.ಎಸ್. ಈಶ್ವರ ಗೌಡ

0
231

ಬೆಳಗಾಯಿತು ವಾರ್ತೆ
 ಕೊಟ್ಟೂರು: ಕೊಟ್ಟೂರು ಕೆರೆಗೆ ನೀರು ತುಂಬಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತಾಲೂಕಿನ 35 ಗ್ರಾಮದ ಮುಖಂಡರ ನಿಯೋಗವು ಮನವಿ ಸಲ್ಲಿಸಿದ್ದೇವೆ ನಮ್ಮ ಮನವಿಗೆ ಸಿಎಂ ಸಕರಾತ್ಮಕವಾಗಿ ಸ್ಪಂದಿಸಿದ್ದು ಈ ಯೋಜನೆ ಶೀಘ್ರದಲ್ಲೇ ಜಾರಿಗೊಳ್ಳಲಿದೆ ಎಂದು ಕೊಟ್ಟೂರು ಕೆರೆ ನೀರು ತುಂಬಿಸುವ ವೇದಿಕೆಯ ಅಧ್ಯಕ್ಷರಾದ ಕೆ.ಎಸ್.ಈಶ್ವರ ಗೌಡ್ರು ಹೇಳಿದರು.
ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಜಗಳೂರು ಕೆರೆಗೆ ನೀರು ಸರಬರಾಜಾಗುತ್ತಿದ್ದು ನೈಸರ್ಗಿಕ ಗುರುತ್ವಾಕರ್ಷಣೆಯ ಆಧಾರದ ಮೇಲೆ ಗಡಿಮಾಕುಂಟೆ ಕೆರೆ ಉಜ್ಜಿನಿ ಕೆರೆಯಿಂದ ಕೊಟ್ಟೂರು ಕೆರೆಗೆ 2.86 ಟಿಎಂಸಿ ನೀರು ಹರಿಸಿದರೆ ಕೊಟ್ಟೂರು ತಾಲೂಕು ನೀರಾವರಿ ಪ್ರದೇಶವಾಗಿ ರೈತರ ಬದುಕು ಹಸನಾಗುತ್ತದೆ ಎಂದು ಹೇಳಿದರು.
ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಜಿಂದಾಲ್ ಏರ್ಪೋರ್ಟ್ ನಲ್ಲಿ ಬರುತ್ತಿರುವಾಗ ಬಳ್ಳಾರಿ ಸಂಸದರಾದ ವೈ ದೇವೇಂದ್ರಪ್ಪ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಪಿ ಚನ್ನಬಸವನಗೌಡ ನೇತೃತ್ವದಲ್ಲಿ ತಾಲೂಕಿನ ಏಳು ಕೆರೆಗಳಿಗೆ ನೀರು ತುಂಬಿಸುವ ಕುರಿತು ಮನವಿ ಸಲ್ಲಿಸಿದ್ದೇವೆ ತಿಳಿಸಿದರು.
ಅತಿಶೀಘ್ರದಲ್ಲೇ ಕೊಟ್ಟೂರು ಕೆರೆಗೆ ನೀರು ತುಂಬಿಸಿದರೆ ಮಳೆಯ ಅಭಾವದಿಂದ ಬೇಸತ್ತಿರುವ ರೈತಾಪಿ ವರ್ಗಕ್ಕೆ ಅತ್ಯಂತ ಅನುಕೂಲವಾಗುವುದರ ಜೊತೆಗೆ ತಾಲೂಕಿನ ಜನತೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದ್ದು ತಾಲೂಕಿನಲ್ಲಿ ಬರಗಾಲ ಎಂಬ ಪದ ಸುಳಿದಾಡಲು ಅವಕಾಶವಿರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಟ್ಟೂರು ಕೆರೆ ನೀರು ತುಂಬಿಸುವ ವೇದಿಕೆಯ ಮುಖಂಡರಾದ ನಾಗರಾಜ ಬೇಲಿಗೌಡ, ಅಡಿಕೆ ಮಂಜುನಾಥ್, ಹೂಗಾರ್ ರಾಜಣ್ಣ, ದೂಪದಹಳ್ಳಿ ವಿ ನಾಗರಾಜ್, ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದಯ್ಯ, ಬೋರ್ವೆಲ್ ತಿಪ್ಪೇಸ್ವಾಮಿ, ನಿಂಬಳಗೇರಿ ಕಲ್ಲೇಶಪ್ಪ, ಮುಂತಾದವರು ಇದ್ದರು.

Previous articleಏಕೈಕ ಹಗಲು-ರಾತ್ರಿ ಟೆಸ್ಟ್ ಪಂದ್ಯ:ಶತಕ ಬಾರಿಸಿದ ಸ್ಮೃತಿ
Next articleಎಸ್. ಕೆ. ಮೋದಿ ಅವರು ಈ ಮಣ್ಣಿನಿಂದ ಗಳಿಸಿದ್ದ ಸಂಪತ್ತನ್ನು ಜನರ ವಿದ್ಯೆಗೆ ದಾನ ಮಾಡಿದ್ದಾರೆ.

LEAVE A REPLY

Please enter your comment!
Please enter your name here