24.3 C
New York
Friday, July 30, 2021

Buy now

spot_img

ಕಾರ ಹುಣ್ಣಿಮೆ ಹಬ್ಬದ ದಿನದಂದು ಎತ್ತುಗಳ ಸ್ಪರ್ಧೆ


ಬಳ್ಳಾರಿ: ತಾಲ್ಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಗುರುವಾರ ಕಾರ ಹುಣ್ಣಿಮೆ ಹಬ್ಬದ ಪ್ರಯುಕ್ತ ಎತ್ತುಗಳ ಸ್ಪರ್ಧೆ ಆಯೋಜಿಸಲಾಗಿತ್ತು.

ಸಂಗನಕಲ್ಲು ಗ್ರಾಮದ ಅಗಸೆಬಾಗಿಲ ಮುಂದೆ ಮಧ್ಯಾನ ರೈತರು ಸುಮಾರು 20ಕ್ಕೂ ಹೆಚ್ಚು ಜೋಡೆತ್ತುಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಗೆದ್ಧ ಎತ್ತುಗಳು
ಸಂಗನ ಕಲ್ಲು ಗ್ರಾಮದ ಮರೇಗೌಡ ಎಂಬುವವರ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಜಯಶಾಲಿಗಳಾದವು

ಹಿರಿಯರ ಕಾಲದಿಂದಲೂ ಕಾರ ಹುಣ್ಣಿಮೆ ದಿನದಂದು ರೈತರು ಎತ್ತುಗಳ ಸ್ಪರ್ಧೆಯನ್ನು ಮಾಡುತ್ತಾ ಬಂದಿದ್ದಾರೆ ಅದರಂತೆ ಸಾಂಕೇತಿಕವಾಗಿ ಸರಳವಾಗಿ ಈ ವರ್ಷ ಆಚರಿಸಲಾಗಿದೆ ಹಾಗೂ ಗ್ರಾಮೀಣ ಕ್ರೀಡೆಗಳನ್ನು ಪ್ರೋತಾಹಿಸುವ ಸಲುವಾಗಿ ಸ್ಪರ್ಧೆಯಲ್ಲಿ ಜಯಶಾಲಿಯಾದ ರೈತರ ಎತ್ತುಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದರು.ಸಂಗನಕಲ್ಲು ಕೃಷ್ಣಪ್ಪ ಗೌರವಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ರೈತರಿಗೆ ಮತ್ತು ಎತ್ತುಗಳಿಗೆ ಅವಿನಾಭಾವ ಸಂಬಂಧವಿದೆ ಪ್ರತಿವರ್ಷ ರೈತರು ಕಾರ ಹುಣ್ಣಿಮೆ ದಿನದಂದು ಎತ್ತುಗಳ ಕೋಡುಗಳಿಗೆ ಮತ್ತು ಮೈಗೆ ಬಣ್ಣ ಹಚ್ಚಿ ಸ್ಫರ್ಧೆ ಬಿಟ್ಟು ಗೆದ್ಧ ಎತ್ತುಗಳನ್ನು ಊರೆಲ್ಲಾ ಮೆರವಣಿಗೆ ಮಾಡುತ್ತಾರೆ ಆದರೆ ಕೋವಿಡ್ ಹಿನ್ನೆಲೆ ಎತ್ತುಗಳ ಸ್ಪರ್ಧೆ ಆಯೋಜಿಸದಂತೆ ನಿರ್ಭಂದ ಹೇರಲಾಗಿದೆ
ಆದ್ದರಿಂದ ಗ್ರಾಮದ ಹಿರಿಯ ಮಾರ್ಗದರ್ಶನದಲ್ಲಿ ಸಾಂಕೇತಿಕವಾಗಿ ಸರಳವಾಗಿ ಹಬ್ಬ ಆಚರಿಸಲಾಗಿದೆ – ಗಣೇಶ್ ಯುವ ಮುಖಂಡ, ಸಂಗನಕಲ್ಲು

ಈ ಸಂದರ್ಭದಲ್ಲಿ ಈಶ್ವರಪ್ಪ, ಕೃಷ್ಣ, ಶಿವಶಂಕರ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
2,875FollowersFollow
0SubscribersSubscribe
- Advertisement -spot_img

Latest Articles