7.3 C
New York
Monday, December 5, 2022

Buy now

spot_img

“ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ”: ವಿಧಾನ ಪರಿಷತ್ ಸದಸ್ಯ ರವಿ ಕುಮಾರ್

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ೨೦೧೩ರಲ್ಲಿ ಪ್ರೌಢಶಾಲಾ ಸಹಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ನೇಮಕಾತಿಗೆ ನೋಟಿಫಿಕೇಷನ್ ಹೊರಡಿಸಲಾಗುತ್ತದೆ. ೨೦೧೨-೧೩ರಲ್ಲಿ ೩,೦೦೭ ಹುದ್ದೆಗೆ ನೋಟಿಫಿಕೇಷನ್ ಮಾಡಲಾಗುತ್ತದೆ. ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಆರೋಪಿಸಿದ್ದಾರೆ.

ನಾನ್ ಮೆರಿಟ್ ಶಿಕ್ಷಕರು ನೇಮಕ ಮಾಡಲಾಗಿದೆ ಕಾಂಗ್ರೆಸ್ ಹೇಗೆ ಭ್ರಷ್ಟಾಚಾರದಲ್ಲಿ ರ್ಯಾಂಕ್ ಪಡೆದಿದೆ ಅಂದ್ರೆ. ಪರೀಕ್ಷೆ ಬರೆಯದವರನ್ನೂ ನೇಮಕ ಮಾಡಿದೆ. ಇದು ಬಹಿರಂಗ ಆಗಿದೆ. ೫-೭-೨೦೨೧ರಂದು ಬೆಳಕಿಗೆ ಬಂದಿದೆ. ಶಿಕ್ಷಣ ಇಲಾಖೆಯಲ್ಲೇ ಒಬ್ಬರನ್ನ, ೧೨ ಸಹ ಶಿಕ್ಷಕರನ್ನ ಬಂಧನ ಮಾಡಲಾಗಿದೆ. ಅವರೀಗ ಬಂಧೀಖಾನೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ೨೦೧೨-೧೩ರಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಪತ್ರ ನೀಡಿ,ಆಯ್ಕೆ ಪ್ರಕ್ರಿಯೆ ಮಾಡಿದೆ ಎಂದು ವಿವರಿಸಿದ್ದಾರೆ.

ಅಂತಿಮ ಪಟ್ಟಿ ಪೂರ್ಣಗೊಳಿಸಿದ್ರೂ, ಮುಖ್ಯ ಆಯ್ಕೆ ಪಟ್ಟಿಯಲ್ಲಿ ಹಾಜರಾಗದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಪಟ್ಟಿಗೆ, ಮೆರಿಟ್ ಇಲ್ಲದವರ ಆಯ್ಕೆ ಮಾಡಲಾಗಿದೆ. ಕನಿಷ್ಠ ಅರ್ಹತಾ ಅಂಕವೂ ಪಡೆಯದವರನ್ನೂ ನೇಮಕ ಮಾಡಿದ್ದಾರೆ. ಅಕ್ರಮ ನೇಮಕಾತಿಗೆ ಫೋರ್ಜರಿ ದಾಖಲೆ ನೀಡಿರೋದು ಕಂಡು ಬಂದಿದೆ. ನೇಮಕಾತಿ ವೇಳೆ ಎಲ್ಲಾ ನಿಯಮ ಗಾಳಿಗೆ ತೂರಲಾಗಿದೆ. ನೇಮಕಾತಿ ವೇಳೆ ಹೋಲಿಕೆಯ ಹೆಸರಿನವರಿಗೆ ಉದ್ಯೋಗ ನೀಡಲಾಗಿದೆ ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,593FollowersFollow
0SubscribersSubscribe
- Advertisement -spot_img

Latest Articles