ನವೀಕರಿಸಲಾದ ಜಲಿಯನ್ ವಾಲಾಬಾಗ್ ಸ್ಮಾರಕವನ್ನು ಉದ್ಘಾಟಿಸಿದ ಬಳಿಕ, ಅಫ್ಘಾನಿಸ್ತಾನದಲ್ಲಿ ಉದ್ಭವಿಸರುವ ಗಲಭೆಯ ಕುರಿತಾಗಿ ಹಾಘು ಅಲ್ಲಿ ವಾಸಿಸುತ್ತಿದ್ದ ಭಾರತೀಯರನ್ನು ರಕ್ಷಿಸುವ ಕುರಿತಾಗಿ ಮಾತನಾಡಿದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು, “ಕಷ್ಟದಲ್ಲಿರುವ ಭಾರತೀರಯನ್ನು ರಕ್ಷಿಸಲು ಭಾರತ ಎಂದಿಗೂ ಸಿದ್ಧವಾಗಿದೆ. ಭಾರತೀಯರು ಪ್ರÀಪಂಚದ ಯಾವ ಮೂಲೆಯಲ್ಲಿರಲಿ, ಅದು ಏನೆ ಸಂದರ್ಭವಾಗಿರಲಿ, Äದಾಹರಣೆಗೆ ಅಫ್ಗಾನಿಸ್ತಾನದ ಬಿಕ್ಕಟ್ಟು, ಕೊರೊನಾ ಬಿಕ್ಕಟ್ಟು ಅಥವಾ ಇನ್ನಾವುದೇ ಸಮಸ್ಯೆ ಒದಗಿ ಬಂದರೂ ಸಹಿತ ನಮ್ಮವರನ್ನು (ಭಾರತೀಯರನ್ನು) ರಕ್ಷಿಸಿಯೇ ತೀರುತ್ತೇವೆ. ಕಷ್ಟದಲ್ಲಿ ಸಿಲುಕಿರುವ ಭಾರತೀಯರಿಗೆ ರಕ್ಷಣೆಯ ಅವಶ್ಯಕತೆ ಇದು ಎಂಬುದು ತಿಳಿದು ಬಂದರೆ, ಕೂಡಲೆ ಅವರ ರಕ್ಷಣೆಯನ್ನು ಮಾಡಲು ಭಾರತ ಎಂದೆAದಿಗೂ ಸಿದ್ಧವಾಗಿರುತ್ತದೆ. ಪ್ರಸ್ತುತ ಅಫ್ಗಾನಿಸ್ತಾನದಲ್ಲಿ ವಾಸಿಸುತ್ತಿರುವ ಭಾರತೀಯರನ್ನು ಮರಳಿ ನ್ಮಮ ದೇಶಕ್ಕೆ ಕರೆತರುವ ಕೆಲಸವನ್ನು ಪ್ರಸ್ತುತ ಭಾರತ ಸರ್ಕಾರ ಮಾಡುತ್ತಿದೆ. ಇಲ್ಲಿಯವರೆಗೆ ನಾವು ಆಪೇಷನ್ ‘ದೇವಿ ಶಕ್ತಿ’ ಮೂಲಕ 550ಕ್ಕೂ ಅಧಿಕ ಜನರನ್ನು ಅಫ್ಗಾನಿಸ್ತಾನದಿಂದ ಭಾತಕ್ಕೆ ಮರಳಿ ಕರೆತರಲಾಗಿದೆ. ಇನ್ನು ಅಫ್ಗಾನಿಸ್ತಾನದಲ್ಲಿ ಅದೆಷ್ಟು ಭಾರತೀಯರು ವಾಸಿಸುತ್ತಿದ್ದಾರೆ ಎಂಬುದ ಕುರಿತಾಗಿ ನಿಖರವಾದ ಮಾಹಿತಿ ಇಲ್ಲ. ಇಲ್ಲಿಯವರೆಗೆ ಅಫ್ಗಾನಿಸ್ತಾನವನ್ನು ತೊರೆದು ಭಾರತಕ್ಕೆ ಮರಳಲು ಇಚ್ಛಿಸಿದವರನ್ನು ಕರೆತರಲಾಗಿದೆ. ಈಗಾಗಲೆ ನಾವು ಭಾರತಕ್ಕೆ ಕರೆ ತಂದಿರುವ 550 ಜನರ ಪೈಕಿ 260 ಜನರು ಭಾರತೀಯರು ಮತ್ತು ಉಳಿದವರೆಲ್ಲ ಹೊರ ದೇಶದವರು. ನಾವು ಈ ಕಾರ್ಯಕ್ಕಾಗಿ ಹಲವು ಏಜೆನ್ಸಿಗಳ ಸಹಾಯವನ್ನು ಸಹ ಪಡೆದುಕೊಳ್ಳುತ್ತಿದ್ದೇವೆ. ಅಫ್ಗಾನಿಸ್ತಾನದ ರಾಜಧಾನಿ ಕಾಬುಲ್ ಹಾಗು ಉಜಕಿಸ್ತಾನದ ರಾಜಧಾನಿ ದುಶನ್ಬೆಯಿಂದ ಭಾರತೀಯರನ್ನು ಮರಳಿ ನ್ಮಮ ದೇಶಕ್ಕೆ ಕರೆತರುವ ಕೆಲಸವನ್ನು ಪ್ರಸ್ತುತ ಭಾರತ ಸರ್ಕಾರ ಮಾಡುತ್ತಿದೆ” ಎಂದು ಹೇಳಿದರು.
ಅಫ್ಘಾನಿಸ್ತಾನದಲ್ಲಿ ಗಲಭೆ ಆರಂಭಗೊAಡಿದಾಗಲೂ, ಭಾರತೀಯರ ಸ್ಥಳಾಂತರದ ಕುರಿತಾಗಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಗ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಅಫ್ಗಾನಿಸ್ತಾನದಲ್ಲಿ ನೆಲೆಸಿದ್ದ ಭಾರತೀಯ ರಾಯಭಾರಿಗಳನ್ನು ಹಿಂದಕೆ ಕರೆತರುವ ಹಾಗೆ ಮಾನ್ಯ ಪ್ರಧಾನ ಮಂತ್ರಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಆದೇಶ ಹೊರಡಿಸಿದ್ದಾರೆ. ಆದ್ದರಿಂದ ಭಾರತೀಯ ರಾಯಭಾರಿಗಳನ್ನು ಇದೀಗ ಅಫ್ಗಾನಿಸ್ತಾನದಿಂದ ಗುಜರಾತ್ ರಾಜ್ಯದ ಜಾಮನಗರಗೆ ಕರೆತರಲಾಗಿದೆ. ಇಲ್ಲಿ ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು, ಊಟೋಚಾರವನ್ನು ಮಾಡಿಕೊಡಬೇಕಾಗಿ ಮಾನ್ಯ ಪ್ರಧಾನ ಮಂತ್ರಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಆದೇಶಿಸಿದ್ದಾರೆ.

Previous articleಕಳ್ಳರ ಬಂಧನ:ಲಕ್ಷಾಂತರ ಮೌಲ್ಯದ ತಾಡಪಾಲುವಶ
Next article62 ವರ್ಷದ ಮಹಿಳೆ ಕಾಣೆ: ಪ್ರಕರಣ ದಾಖಲು

LEAVE A REPLY

Please enter your comment!
Please enter your name here