ಕಂಪ್ಲಿ: ತಾಲೂಕಿನ ದೇವಸಮುದ್ರ ಕ್ರಾಸ್ ಬಳಿಯ ಮಾರೆಮ್ಮ ದೇವಾಲಯದ ಸುತ್ತಮುತ್ತಲಿನ ಬಾಳೆ, ದಾಳೀಂಬೆ, ಮೂಸುಂಬೆ, ಪಪ್ಪಾಯ ತೋಟ ಸೇರಿದಂತೆ ಮೆಕ್ಕೆಜೋಳ ಹೊಲಗಳಲ್ಲಿ ಕರಡಿ ದಾಳಿ ನಡೆಸಿ ರೈತರು ಬೆಳೆದ ಬೆಳೆಯನ್ನು ಕರಡಿಗಳು ಹಾನಿ ಮಾಡುತ್ತಿವೆ ಎಂದು ಇಲ್ಲಿನ ರೈತರ ಆರೋಪಿಸುತ್ತಿದ್ದಾರೆ.
ರೈತರಾದ ಜಾಸ್ತಿ ಜಗಮೋಹನ್ ದಾಳಿಂಬೆ, ಮುಸುಂಬೆ, ಬಾಳೆ ಮತ್ತು ಪಪ್ಪಾಯದ ತೋಟ, ಮಾದಿನೇನಿ ಶಿವಶಂಕರ್ ಬಾಳೆ ತೋಟ ಹಾಗು ಭೀಮೇಶನ ಮೆಕ್ಕೆಜೋಳದ ಹೊಲದಲ್ಲಿ ಪ್ರತಿನಿತ್ಯ ಕರಡಿಗಳ ಹಾವಳಿಗೆ ರೈತರು ಹೈರಾಣಾಗುತ್ತಿದ್ದಾರೆ. ಪಕ್ಕದಲ್ಲಿರುವ ಗುಡ್ಡಗಳಿಂದ ಹೊಲ ಮತ್ತು ತೋಟಗಳಲ್ಲಿ ರೈತರ ಬೆಳೆದ ಬೆಳೆಯನ್ನು ನಾಶವಾಗುತ್ತಿದ್ದರೂ, ರೈತ ಗೋಳು ಕೇಳಲು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ರೈತರ ನೋವು ಕಾಣುತ್ತಿಲ್ಲ, ಪ್ರತಿಸಾರಿ ರೈತ ಬೆಳೆದ ಬೆಳೆ ಹಾನಿಗೊಳಗಾದ ರೈತರ ಹೊಲ ಮತ್ತು ತೋಟಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಎರಡು ಫೋಟೋ ತೇಗೆದುಕೊಂಡು ಮೇಲಾಧಿಕಾರಿಗಳಿಗೆ ತಿಳಿಸಿ ಪರಿಹಾರವನ್ನು ನೀಡಿಸುವುದಾಗಿ ಸುಳ್ಳು ಭರವಸೆಗಳು ಕೇಳಿ ರೈತರ ಸಾಕಾಗಿಹೋಗಿದೆ.