ಕನ್ನಡ ಕವಿ “ಚಂಪಾ” ನಿಧನಕ್ಕೆ ಕಲಾಕೇಂದ್ರದಿಂದ ಸಂತಾಪ

0
181

ಬೆಳಗಾಯಿತು ವಾರ್ತೆ
ಕೊಟ್ಟೂರು: ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಸೋಮವಾರ ಬೆಳಗ್ಗೆ ವಿಧಿವಶರಾದ ಹಿನ್ನೆಲೆ ಕೊಟ್ಟೂರು ತಾಲೂಕು ಕಲಾ ಕೇಂದ್ರದ ಅಧ್ಯಕ್ಷರಾದ ಎಂ.ಎಂ.ಜೆ ಸತ್ಯಪ್ರಕಾಶ್ ಸಂತಾಪ ಸೂಚಿಸಿದರು.

ಸೋಮವಾರ ಪಟ್ಟಣದ ರೇಣುಕಾ ಚಿತ್ರಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2002 ರಲ್ಲಿ ಕೊಟ್ಟೂರು ಪಟ್ಟಣಕ್ಕೆ ಆಗಮಿಸಿ ನಮ್ಮ ಕಲಾಕೇಂದ್ರದ ಆಶ್ರಯದಲ್ಲಿ ನಡೆದ ನಾಟಕೋತ್ಸವದಲ್ಲಿ ಚಂಪಾ ಭಾಗವಹಿಸಿದ್ದರು. ಅವರ ಸಾಹಿತ್ಯದ ಸರಳತೆಯ ಮಾತುಗಳು ಇಂದಿಗೂ ಅವಿಸ್ಮರಣೀಯ ಎಂದು ಭಾವುಕ ನುಡಿಗಳನ್ನಾಡಿದರು.

ಕನ್ನಡದ ಕವಿ, ನಾಟಕಕಾರ, ಹೋರಾಟಗಾರರಾದ ಚಂದ್ರಶೇಖರ ಪಾಟೀಲ ಅವರು ‘ಚಂಪಾ’ ಎಂದೇ ಪ್ರಖ್ಯಾತರಾಗಿದ್ದ ಅವರು ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿದ ಅವರನ್ನು ಮಾಜಿ ಸಚಿವರಾದ ಎಂ.ಪಿ. ಪ್ರಕಾಶ್, ಎಂ.ಎಂ.ಜೆ.ಸದ್ಯೋಜಾತ ಹಾಗು ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಹರಪನಹಳ್ಳಿಯಯ ಶ್ರೀ ಚಂದ್ರಮೌಳೇಶ್ವರ ಸ್ವಾಮಿಗಳು ಸೇರಿದಂತೆ ಅನೇಕ ಗಣ್ಯರು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದ ಸವಿನೆನಪು ಇಂದಿಗೂ ನಮ್ಮ ಕಣ್ಣುಗಳಿಗೆ ಭಾಸವಾಗುತ್ತದೆ ಎಂದು ಹೇಳಿದರು.

Kottur news bellary belagayithu
Previous article“ವೀಕೆಂಡ್ ಕರ್ಪ್ಯೂ ಪರಿಣಾಮವಿಲ್ಲ.”
Next articleಕೋವಿಡ್ ಚಿಕಿತ್ಸೆಗೆ ಬಳಸಬಹುದಾದ ಪ್ರಪ್ರಥವ ಔಷಧಿ – ಮಾಲ್ನುಪಿರವೈರ್ ಮಾತ್ರೆ..

LEAVE A REPLY

Please enter your comment!
Please enter your name here