ಓಮಿಕ್ರಾನ್ ತಡೆಗಟ್ಟಲು ಮೂರು ನಿಯಮಗಳನ್ನು ಸೂಚಿಸಿದ ವಿಶ್ವ ಆರೋಗ್ಯ ಸಂಸ್ಥೆ..

  0
  268


  ಜಿನಿವಾದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೂಸ್ ಅದನಮ್ ಗಿಬ್ರಿಯಾಸ್‌ರವರು, “ಕೋವಿಡ್ ಸಾಂಕ್ರಾಮಿಕ ಪಿಡುಗಿನ ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ನಾವೆಲ್ಲರು ಒಂದು ವಿಷಯವನ್ನು ತಿಳಿದುಕೊಳ್ಳಲೇಬೇಖು. ಅದೇನೆಂದರೆ, ಕೊವಿಡ್ ಸಾಂಕ್ರಾಮಿಕ ಖಾಯಿಲೆಯನ್ನು ಬೆರು ಸಮೇತ ಕಿತ್ತೊಗೆಯಲು ನಾವೆಲ್ಲರು ಒಟ್ಟಾಗಿ, ಒಗ್ಗಟ್ಟಾಗಿ ಶ್ರಮಿಸಿದೆ, 2022ರ ಅಂತ್ಯದೊಳಗಾಗಿ ಈ ಸಾಂಕ್ರಾಮಿಕ ಪಿಡುಗಿನಿಂದ ನಾವೆಲ್ಲರು ಮುಕ್ತಿ ಹೊಂದಬಹುದು.” ಎಂದು ಹೇಳಿದ್ದಾರೆ.
  3 ನಿಯಮಗಳು ಬ್ರೇಕ್ ಮಾಡಿದ್ರೆ, ಅಪಾಯ ಗ್ಯಾರೆಂಟಿ!
  ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೂಸ್ ಅದನಮ್ ಗಿಬ್ರಿಯಾಸ್‌ರವರು, ಓಮಿಕ್ರಾನ ಮತ್ತು ಇನ್ನಿತರೆ ಸಾಂಕ್ರಾಮಿಕ ಖಾಯಿಲೆಗಳನ್ನು ತಡೆಗಟ್ಟಲು ಮೂರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಹೇಳಿದ್ದಾರೆ. ಅವು ಹೇಳಿರುವ ಆ ಮೂರು ನಿಯಮಗಳು ಇಂತಿವೆ..
  • ನೂತನವಾಗಿ ಜನ್ಮತಾಳುತ್ತಿರುವ ವೈರಾಣುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ರೋಗಲಕ್ಷಣ ಕಂಡುಬAದ ತಕ್ಷಣವೇ ಸಂಪರ್ಕ ತಡೆಯನ್ನು ಹೊಂದಿ, ತಡಮಾಡದೆ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಹೀಗೆ ಮಾಡುವುದರಿಂದ ವೈರಾಣುಗಳು ಪ್ರಾರ್ಥಮಿಕ ಹಂತದಲ್ಲಿರುವಾಗಲೇ ಅದನ್ನು ನಾಶಪಡಿಸಬೇಕು.
  • ವೈರಾಣು ರೂಪಾಂತರಗಳು ಸಷ್ಟಿಯಾಗಬಾರದೆಂದರೆ, ಅದನ್ನು ಸಂಪೂರ್ಣವಾಗಿ ಬುಡ ಸಮೇತ ಕಿತ್ತೊಗೆಯಬೇಕು. ಹೀಗಾಗಬೇಕಾದರೆ, ಎಲ್ಲರು ಕಡ್ಡಾಯವಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು.
  • ಎಲ್ಲಾ ದೇಶಗಳಲ್ಲು ಕೋವಿಡ್ ತಡೆಗಟ್ಟುವ ಲಸಿಕಾ ವಿತರಣಾ ಕಾರ್ಯಕ್ರಮ ಬಿರುಸಾಗಿಸಾಗಬೇಕು. 2022ರ ಜುಲೈ ಅಂತ್ಯದೊಳಗಾಗಿ ವಿಶ್ವದ ಎಲ್ಲಾ ರಾಷ್ಟçಗಳಲ್ಲು ಶೇಕಡ 100ರಷ್ಟು ಲಸಿಕೆ ವಿತರಣೆಯನ್ನು ಸಾಧಿಸಿರಬೇಕು.

  Previous articleಅವೈಜ್ಞಾನಿಕ ಕಾಮಗಾರಿ: ವಾಹನ ಸಂಚಾರಕ್ಕೆ ತೊಂದರೆ
  Next article“ಮಹಿಳೆಯ ಸಬಲಿಕರಣದಿಂದ ಕೌಟುಂಬಿಕ ಸಬಲಿಕರಣ ಸಾಧ್ಯ.”

  LEAVE A REPLY

  Please enter your comment!
  Please enter your name here