ನಮಗೆಲ ತಿಳಿದಿರುವಂತೆ, ಬಿ.1.1.529 ವಂಶಕ್ಕೆ ಸೇರಿದ ಸರ್ಸ್-ಕೋವ್-2 ಓಮಿಕ್ರಾನ್ ವೈರಾಣುವಿನ ಸೋಂಕು ಮೊಟ್ಟಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ಜನರಲ್ಲಿ ಕಾಣಿಸಿಕೊಂಡಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಅಮೇರಿಕಾ, ಕೆನೆಡಾ, ಲಂಡನ್ ಸೇರಿದಂತೆ ವಿಶ್ವದ ಬಹುತೇಕ ರಾಷ್ಟçಗಳು, ಪ್ರವಾಸ ನಿರ್ಬಂಧ ಹೊರಡಸಿದೆ. ಇದರ ಅನುಸಾರ, ದಕ್ಷಿಣ ಆಫ್ರಿಕಾಗೆ ತಮ್ಮ ದೇಶಗಳಿಂದ ( ನಿರ್ಬಂಧ ವಿಧೀಸಿದ ದೇಶಗಳಿಂದ) ಯಾರು ಕೂಡ ಪ್ರವಾಸ ಕೈಗೊಳ್ಳುವಂತಿಲ್ಲ. ಈ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಓಮಿಕ್ರನಾ ವೈರಾಣುವನ್ನು ಪತ್ತೆಹಚ್ಚಿದ್ದಕ್ಕಾಗಿ ನಮಗೆ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳುವ ಮೂಲಕ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ.
ವಿಶ್ವದ ಬಹುತೇಕ ರಾಷ್ಟçಗಳು, ದಕ್ಷಿಣ ಆಫ್ರಿಕಾದ ಮೇಲೆೆ ಪ್ರವಾಸ ನಿರ್ಬಂಧ ಹೇರಿದ್ದರಿಂದ ಆ ದೇಶದ ಪ್ರವಾಸೋದ್ಯಮದ ಮೇಲೆ ದೊಡ್ಡ ಪೆಟ್ಟು ಕೊಟ್ಟಂತಾಗಿದೆ. ಈ ಕುರಿತು ಅಂತರಾಷ್ಟಿçÃಯ ಸಂಬAಧಗಳು ಮತ್ತು ಸಹಕಾರ ಇಲಾಖೆ (ಡಿರ್ಪಾಟ್ಮೆಂಟ್ ಆಫ್ ಇಂಟರ್ನ್ಯಾಷ್ನಲ್ ರಿಲೇಷನ್ಸ್ ಆಂಡ್ ಕೊಆಪರೇಷನ್) ಪ್ರತಿಕ್ರಿಯಿಸಿದ್ದು, ಓಮಿಕ್ರನಾ ವೈರಾಣುವಿನ ಸಾಂಕ್ರಾಮಿಕ ಖಾಯಿಲೆಯ ಹಿನ್ನಲೆ, ಯಾವ ದೇಶಗಳು ಸಹ, ಬೇರೊಂದು ದೇಶಕ್ಕೆ ತೊಂದರೆವುAಟು ಮಾಡುವಂತಹ ಯಾವ ತಪ್ಪು ತೀರ್ಮಾನಗಳನ್ನು ತೆಗೆದುಕೊಳ್ಳಬಾರದು. ದಕ್ಷಿಣ ಆಫ್ರಿಕಾ ಓಮಿಕ್ರಾನ್ ವೈರಾಣು ಬಿ.1.1.529 ವಂಶಕ್ಕೆ ಸೇರಿದ ಸರ್ಸ್-ಕೋವ್-2 ವೈರಾಣುವಾಗಿದೆ ಎಂಬುದನ್ನು ಪತ್ತೆಹಚ್ಚಿದೆ. ವಿಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತ್ವರಿತವಾಗಿ ಈ ವೈರಾಣುವನ್ನು ಪತ್ತೆಹಚ್ಚುವ ಮೂಲಕ ವಿಶ್ವದ ಬೇರೆ ರಾಷ್ಟçಗಳು ಈ ಕುರಿತು ಎಚ್ಚರಿಕೆವಹಿಸುವಂತೆ ಮಾಡಿದ್ದಕ್ಕೆ, ನಾವೆಲ್ಲರು ದಕ್ಷಿಣ ಆಫ್ರಿಕಾದ ಕಾರ್ಯವನ್ನು ಶ್ಲಾಘಿಸಬೇಕು. ಆದರೆ ಅದರ ಬದಲಾಗಿ ದಕ್ಷಿಣ ಆಫ್ರಿಕಾಗೆ ಪರೋಕ್ಷವಾಗಿ ಶಿಕ್ಷೆ ವಿಧಿಸಲಾಗಿದೆ ಎಂದು ದಕ್ಷಿಣಾ ಆಫ್ರಿಕಾದ ಸರ್ಕಾರ ಆರೋಪ ಮಾಡಿದೆ.