ಕುರುಗೋಡು: ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ನೆಲ್ಲುಡಿ ಕೊಟ್ಟಾಲು, ಶಂಕರ್ ಸಿಂಣ್ ಕ್ಯಾಂಪ್, ಹೊಸನೆಲ್ಲುಡಿ, ಎಮ್ಮಿಗನೂರು, ಎಚ್.ವೀರಾಪುರ, ಯರಿಂಗಳಿಗಿ ಮತ್ತು ಸೋಮಸಮುದ್ರ ಗ್ರಾಮಗಳಲ್ಲಿ ಈ ವರ್ಷ ಮೊಹರಂ ಹಬ್ಬ ಆಚರಿಸುವಂತಿಲ್ಲ ಎಂದು ಪಿಎಸ್ಐ ಮಣಿಕಂಠ ಎಚ್ಚರಿಸಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಡೆಸಿದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮದ ಎಲ್ಲ ಜನಾಂಗದವರು ಜಿಲ್ಲಾಧಿಕಾರಿಗಳಿಂದ ಹಬ್ಬ ಆಚರಣೆಗೆ ಅನುಮತಿ ತಂದರೆ ಮಾತ್ರ ಆಚರಣೆಗೆ ಅವಕಾಶ ನೀಡಲಾಗುವುದು.
ಕಾನೂನು ಮೀರಿ ಹಬ್ಬ ಆಚರಿಸುವುದು ಕಂಡುಬAದರೆ ಗ್ರಾಮದ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಮೊಹರಂ ಹಬ್ಬ ಆಚರಣೆ ನಿಷೇಧವಿರುವ ಹಳ್ಳಿಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.