ಕುರುಗೋಡು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಸವಿನೆನಪಿಗಾಗಿ ಕುರುಗೋಡಿನ ಮುಖ್ಯವೃತ್ತದಲ್ಲಿರುವ ಉದ್ಯಾನವನ, ರಸ್ತೆಗಳಿಗೆ ಪುನೀತ್ ರವರ ಹೆಸರು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯ ಶಿವರಾಮೇಗೌಡರ ಬಣದ ಕರವೇ ನೇತೃತ್ವದಲ್ಲಿ ಅಪ್ಪು ಅಭಿಮಾನಿಗಳ ಬಳಗದ ವತಿಯಿಂದ ತಹಶೀಲ್ದಾರರಿಗೆ ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಪ್ಪು ಅಭಿಮಾನಿ ಮಂಜು ಮತ್ತು ಬುಟ್ಟಾ ಮಲ್ಲಿಕಾರ್ಜುನ್ ಮಾತನಾಡಿ, ಪುನೀತ್ ರಾಜಕುಮಾರ್ ರವರು ಬಾಲ ನಾಟನಾಗಿ ಬಣ್ಣದ ಲೋಕಕ್ಕೆ ಪ್ರವೇಶ ನೀಡಿ, ಸಮಾಜಿಕ ಸಂದೇಶ ನೀಡುವ ಆನೇಕ ಸಿನಿಮಾಗಳಲ್ಲಿ ನಟಿಸಿ ರಾಜ್ಯದ ಜನರ ಮನ ಗೆದ್ದಿದ್ದಾರೆ. ಯಾರಿಗೂ ತಿಳಿಯದೆ ಹಾಗೂ ಕಾಣದಂತೆ ಆನೇಕ ಬಡ ಜನರಿಗೆ, ವಿದ್ಯಾರ್ಥಿಗಳಿಗೆ ಸಹಕಾರ ನೀಡಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಕೊಂಡು ಸಮಾಜ ಸೇವೆ ಸಲ್ಲಿಸಿದ ಮಹನ್ ವ್ಯಕ್ತಿಯ ಹೆಸರು ಚಿರಕಾಲ ಉಳಿದು ಅಭಿಮಾನಿಗಳ ಹೃದಯದಲ್ಲಿ ಅಜರಾಮರವಾಗಿರಲು ಕುರುಗೋಡಿನಲ್ಲಿರುವ ಉದ್ಯಾನವನಕ್ಕೆ, ಕಂಪ್ಲಿ ರಸ್ತೆ, ಬಾದನಹಟ್ಟಿ ರಸ್ತೆಗಾಗಲಿ ಪುನೀತ್ ರಾಜಕುಮಾರ್ ರವರ ಹೆಸರು ನಾಮಕರಣ ಮಾಡಿ ಅಭಿವೃದ್ಧಿ ಪಡಿಸಲು ಮುಂದಾಗಬೇಕು. ಇದರಿಂದ ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ಪುನೀತ್ ರವರ ಆದರ್ಶಗಳನ್ನು ಬೆಳಸಲು ಸಹಕಾರಿಯಾಗುತ್ತದೆ ಎಂದು ಮನವಿ ಮಾಡಿಕೊಂಡರು.
ನAತರ ಪುನೀತ್ ಅಭಿಮಾನಿ ಶಿಕ್ಷಕ ಬಸವರಾಜ್ ಮನವಿ ಪತ್ರ ಓದಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಮಾತನಾಡಿ, ಈ ಮನವಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.