ಆರೋಗ್ಯ ಮಗುವಿನ ಹುಡುಕಾಟದಲ್ಲಿ ಇಂದು ನಾವಿದ್ದೇವೆ,
ಆರೋಗ್ಯವಂತ ಮಕ್ಕಳು ದೇಶದ ಹಾಗೂ ಸಮಾಜದ ದೊಡ್ಡ ಸಂಪತ್ತು,
ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅಪೌಷ್ಟಿಕತೆಗೆ ತುತ್ತಾಗುತ್ತಿದ್ದಾರೆ. ಮಕ್ಕಳನ್ನು ಆರೋಗ್ಯವಂತರಾಗಿಸಲು ಸರ್ಕಾರದಿಂದ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು,
ಹೆಚ್ಚೆಚ್ಚು ಜೀವಸತ್ವಗಳು ಮತ್ತು ಖನಿಜವುಳ್ಳ ಆಹಾರ ಸೇವನೆಯಿಂದ ಮಕ್ಕಳು ಅನಾರೋಗ್ಯದಿಂದ ರಕ್ಷಿಸಬಹುದು ಎಂದು ಸಹ ಶಿಕ್ಷಕಿ ಎನ್. ರಾಜೇಶ್ವರಿ
ತಿಳಿಸಿದರು.
ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕವಾಡಿಗರಹಟ್ಟಿಯಲ್ಲಿ ಕರ್ನಾಟಕÀ ಜ್ಞಾನ ವಿಜ್ಞಾನ ಸಮಿತಿ, ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಯುಕ್ತವಾಗಿ ಆಯೋಜಿಸಿದ್ದ ”ಆರೋಗ್ಯವಂತ ಮಕ್ಕಳಿಗಾಗಿ ಹುಡುಕಾಟ” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮಗುವಿಗೆ ಹುಟ್ಟಿನಿಂದಲೇ ಕೆಲ ಕಾಯಿಲೆಗಳು ಬರುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಮಕ್ಕಳು ಬೇಗನೆ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಮಕ್ಕಳಿಗೆ ಬಾಲ್ಯದಲ್ಲೇ ಪೌಷ್ಟಿಕ ಆಹಾರದ ಜತೆಗೆ ಲಸಿಕೆಗಳನ್ನು ನೀಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳ ಆರೋಗ್ಯ ಪೋಷಕರ ಕೈಯಲ್ಲಿದೆ. ಆದ ಕಾರಣ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.