12.6 C
New York
Wednesday, October 27, 2021

Buy now

spot_img

ಆರಂಭಗೊಂಡ ವಾರದ ಸಂತೆ ನೀರಸ ಚಟುವಟಿಕೆ

ಮರಿಯಮ್ಮನಹಳ್ಳಿ:ಪಟ್ಟಣದಲ್ಲಿ ಸುಮಾರು ಮೂರು ತಿಂಗಳಿಂದ ನಡೆಯದ ವಾರದಸಂತೆ ಆರಂಭಗೊಂಡು ಮಾರುಕಟ್ಟೆ ಚೇತರಿಕೆ ಕಂಡಿದೆ.ಕೋವಿಡ್ ಮಾರ್ಗಸೂಚಿಗಳನ್ವಯ ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯುತ್ತಿದ್ದ ವಾರದ ಸಂತೆಯನ್ನು ರದ್ದುಗೊಳಿಸಲಾಗಿತ್ತು.ಜನ ಸೇರುವ ಜಾತ್ರೆ, ಉತ್ಸವ,ಸಂತೆ,ಕಾರ್ಯಕ್ರಮಗಳನ್ನು ರದ್ದು ಗೊಳಿಸಿದಂತೆ ವಾರದ ಸಂತೆಯನ್ನು ರದ್ದು ಗೊಳಿಸಿದ್ದರಿಂದ ಪಟ್ಟಣದ ಸಂತೆಗೂ ಬ್ರೇಕ್ ಬಿತ್ತು. ಹೋಬಳಿ ವ್ಯಾಪ್ತಿಯ 33 ಗ್ರಾಮಗಳಿಗೆ, ಪಟ್ಟಣದ ವಾರದ ಸಂತೆ ಕೇಂದ್ರ ಬಿಂದು.ಅಲ್ಲದೇ ಸಂತೆಯ ವಿವಿಧ ವರ್ತಕರಿಗೂ ಪಟ್ಟಣದ ವಾರದ ಸಂತೆ ಯಾವೋತ್ತು ಹಸಿರ ಹುಲ್ಲುಗಾವಲು. ಪಟ್ಟಣದ ವಾರದ ಸಂತೆಯಿಂದ ಅನೇಕ ಕುಟುಂಬಗಳು,ರೈತರು ಆರ್ಥಿಕ ಲಾಭ ಪಡೆಯುತ್ತವೆ.ಅಲ್ಲದೇ ಸಂತೆಯಲ್ಲಿ ತರಕಾರಿಗಳು, ದಿನಸಿ,ಸೊಪ್ಪುಗಳು, ಮಸಾಲೆ,ಹಣ್ಣು, ರೈತರ ಪರಿಕರಗಳು, ಬಟ್ಟೆ, ಸಿಹಿದಿನಸಿ ಅಲ್ಲದೇ ಅನೇಕ ವ್ಯಾಪಾರಿಗಳು ಜಿಲ್ಲೆ ಹೊರ ಜಿಲ್ಲೆಗಳಿಂದ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಬರುತ್ತಾರೆ. ಆದರೆ ಕೋವಿಡ್ ಮಾರ್ಗಸೂಚಿಗಳಿಂದ ಸುಮಾರು ಮೂರು ತಿಂಗಳಿಂದ ನಡೆಯದ ವಾರದ ಸಂತೆಯಿಂದ ಸಂತೆಯ ಮೇಲೆ ಅವಲಂಬಿತ ವ್ಯಾಪಾರಿಗಳು ಸಾಕಷ್ಟು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.ಜಿಲ್ಲೆ ಹಾಗು ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಹಂತ ಹಂತವಾಗಿ ಅನ್ ಲಾಕ್ ಘೋಷಣೆ ಮಾಡುತ್ತಿರುವುದರಿಂದ ವಾರದ ಸಂತೆಗಳಿಗೂ ಅವಕಾಶ ದೊರೆಯಿತು. ಇದರಿಂದ ಗ್ರಾಮೀಣ ಪ್ರದೇಶಗಳ ಸಂತೆಗಳ ವ್ಯಾಪಾರಿಗಳು ಚೇತರಿಸಿಕೊಳ್ಳಲು ಸಹಕಾರಿಯಾಗಿದ್ದರೂ ಸಂತೆಯಲ್ಲಿ ಗ್ರಾಹಕರ ಸಂಖ್ಯೆ ನೀರಸವಾಗಿತ್ತು ಎಂದು ವ್ಯಾಪಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
2,995FollowersFollow
0SubscribersSubscribe
- Advertisement -spot_img

Latest Articles