ಅಜಿತ್ 5 ಬಿಟಿ ಹತ್ತಿ ಹೆಚ್ಚು ಇಳುವರಿ ರೈತರ ಹೊಲಗಳಲ್ಲಿ ಕ್ಷೇತ್ರೋತ್ಸವ

0
119

ಬೆಳಗಾಯಿತು ವಾರ್ತೆ
ಕೊಟ್ಟೂರು: ತಾಲೂಕಿನ ಗಂಗಮ್ಮನಹಳ್ಳಿ ಮತ್ತು ಹಾರಕನಾಳು ಗ್ರಾಮದ ಹೊಲಗಳಲ್ಲಿ ಬೀಟಿ ಹತ್ತಿ ಹೆಚ್ಚು ಇಳುವರಿ ಹೊಂದಿದ್ದು ರೈತರಿಗೆಅಜಿತ್ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಕ್ಷೇತ್ರೋತ್ಸವವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು. ಅಜಿತ್ 5 ಹತ್ತಿ ತಳಿಯಲ್ಲಿ ಕಾಯಿಗಳ ಸಂಖ್ಯೆ ಹೆಚ್ಚಿಗೆ ಇದ್ದು, ರಸ ಹೀರುವ ಕೀಟಗಳು ಬಾಧೆ ಕಡಿಮೆ ಇದ್ದು ಮತ್ತು ಈ ದಿನಗಳಲ್ಲಿ ಹತ್ತಿಯ ಬೆಲೆ ಉತ್ತಮ ಮಟ್ಟದಲ್ಲಿರುವುದರಿಂದ ರೈತರ ಪ್ರಗತಿಗೆ, ಹತ್ತಿ ಬೆಳೆ ತುಂಬಾ ಉಪಯುಕ್ತವಾಗಿದೆ .ಆದ್ದರಿಂದ ರೈತರು ಅಜಿತ್ ಸೀಡ್ಸ್ ಕಂಪನಿಯ ಅಜಿತ್ 5 ಬಿಟಿ ಹತ್ತಿಯನ್ನು ಬೆಳೆದು ಉತ್ತಮ ಪ್ರಗತಿ ಹೊಂದಬೇಕು ಎಂದು ಕಂಪನಿಯ ಏರಿಯಾ ಮ್ಯಾನೇಜರ್ ರುದ್ರೇಶ್ ಅವರು ರೈತರಿಗೆ ಸಲಹೆ ನೀಡಿದರು..

ಕಾರ್ಯಕ್ರಮದಲ್ಲಿ ಕಂಪನಿಯ ಅಧಿಕಾರಿಗಳಾದ ದತ್ತಾತ್ರೇಯ ಮತ್ತು ಸುತ್ತಮುತ್ತಲಿನ ಗ್ರಾಮದ ಪ್ರಗತಿಪರ ರೈತರು ಭಾಗವಹಿಸಿದ್ದರು.

Previous articleಪಂಜಾಬ್ ತಂಡಕ್ಕೆ ಮಣ್ಣು ಮುಕ್ಕಿಸಿ ಹೀರೋಗಳಾದ ರಾಜಸ್ಥಾನ್ ರಾಯಲ್ಸ್‌ನ ಇಬ್ಬರು ಆಟಗಾರರಿವರು
Next articleನಾಳೆ ವಿದ್ಯುತ್ ವ್ಯತ್ಯಯ

LEAVE A REPLY

Please enter your comment!
Please enter your name here