ಸಿರುಗುಪ್ಪ: ನಮ್ಮ ತಾಲೂಕಿನಲ್ಲಿ ಒಂದು ವಾರಕ್ಕೂ ಅಧಿಕವಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ಅಪಾರ ಫಸಲಿಗೆ ಬಂದ ವಿವಿಧ ಬೆಳೆಗಳು ನಾಶವಾಗಿವೆಂದು ಶಾಸಕ ಎಂ.ಎಸ್.ಸೋಮಲಿoಗಪ್ಪ ಅವರು ಬೆಂಗಳೂರಿನ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ನಿವಾಸದಲ್ಲಿ ಮನವಿ ಸಲ್ಲಿಸಿದರು.
ನಂತರ ಮಾತನಾಡಿ ತಾಲೂಕಿನಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ನನ್ನ ಕ್ಷೇತ್ರದ ರೈತರ ಬೆಳೆಗಳಾದ ಭತ್ತ, ಹತ್ತಿ, ಮೆಣಸಿನಕಾಯಿ, ಕಬ್ಬು, ಜೋಳ, ಹೂ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ಹಾಗೂ ಇನ್ನಿತರ ಬೆಳೆಗಳು ಸಂಪೂರ್ಣ ಹಾನಿಯಾಗಿರುತ್ತವೆ.
ನಾನು ಮತ್ತು ನಮ್ಮ ಸದಸ್ಯರ ಒಂದು ತಂಡ ಹಾಗೂ ತಾಲೂಕು ಅಧಿಕಾರಿಗಳ ಒಂ ದು ತಂಡವು ಖುದ್ದಾಗಿ ನಷ್ಟಕ್ಕೆ ಒಳಗಾದ ರೈತರ ಜಮೀನುಗಳಿಗೆ ಭೇಟಿ ಪರಿಶೀಲನೆ ನಡೆಸಲಾಗಿದೆ. ಉತ್ತನೂರು, ಕರೂರು, ದರೂರು, ಸಿರಿಗೇರಿ, ಶಾನವಾಸಪುರ, ತೆಕ್ಕಲಕೋಟೆ, ಮತ್ತು ನಡವಿ ಗ್ರಾಮದ ರೈತರ ಜಮೀನುಗಳಿಗೆ ಹೋಗಿ ರೈತರ ಬೆಳೆಗಳಾದ ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆಗಳನ್ನು ವಿಕ್ಷಣೆ ಮಾಡಿರುತ್ತೇನೆ.