ಮರಿಯಮ್ಮನ ಹಳ್ಳಿ: ಅಂಗವಿಕಲತೆ ಶಾಪವಲ್ಲ ಅದೊಂದು ನೂನ್ಯತೆ, ಅಂತವರಿಗೆ ಆತ್ಮಬಲ ತುಂಬುವ ನಿಟ್ಟಿನಲ್ಲಿ ಸರಕಾರದ ಜೊತೆ ಹಲವಾರು ಸಂಘ-ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು. ಬಿ.ಎಂ.ಎಂ.ಇಸ್ಪಾತ್ ಕಂಪನಿಯ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಮುಖ್ಯಸ್ಥರಾದ ಗಣೇಶ್ ಹೆಗಡೆ ಅಭೀಪ್ರಾಯಪಟ್ಟರು. ಅವರು ಸಮೀಪದ ತುಂಗ ಭದ್ರಾ ಅತಿಥಿ ಗೃಹದಲ್ಲಿ ಬಿ.ಎಂ.ಎಂ.ಇಸ್ಪಾತ್ ಕಂಪನಿ ಹಾಗೂ ಜೆ.ಎಸ್.ಡಬ್ಲೂ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆಯ್ದ ಅಂಗವಿಕಲರಿಗೆ ಉಚಿತ ಗಾಲಿ ಕುರ್ಚಿ ಮತ್ತು ಶ್ರವಣ ಸಾಧನ ವಿತರಣಾ ಕಾರ್ಯಕ್ರಮ ಉದ್ದೇಶಿಸಿಮಾತನಾಡಿದರು.ಆರೋಗ್ಯವೆಂಬುವುದು ನಮ್ಮೆಲ್ಲಾ ಅವಶ್ಯಕತೆಗಳಲ್ಲೊಂದಾಗಿದ್ದು ಪ್ರತಿಯೊಬ್ಬರೂ ಆರೋಗ್ಯದಿಂದಿರಬೇಕೆಂದು
ಕಾರ್ಯನಿರ್ವಹಿಸುತ್ತಿವೆ. ಅಂಗವಿಕಲರಲ್ಲಿಯ ಕೌಶಲ್ಯ ಗುರಿತಿಸಿ ಅವರಿಗೆ ಸಾಮಾಜಿಕ ಭದ್ರತೆ ನೀಡುವ ದಿಶೆಯಲ್ಲಿ ಅವರಿಗೆ ಉತ್ತಮ ಶಿಕ್ಷಣ, ಪುನರ್ವಸತಿ, ಉದ್ಯೋಗಗಳಲ್ಲಿ ಅವಕಾಶ ನೀಡುವುದರ ಜೊತೆ ಸಮಾಜದಲ್ಲಿ ಸಮಾನತೆ ತುಂಬುವ ಗುರುತರಹೊಣೆ ನಮ್ಮೆಲ್ಲರದಾಗಿದೆ ಎಂದ ಅವರು ಅಂಗವಿಕಲರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವು ಬಹು ಮುಖ್ಯವಾಗಿ ನಮ್ಮ ಕಂಪನಿಯ ಸುತ್ತಮುತ್ತಲಿನ ಆಯ್ದ ಒಟ್ಟು 50 ಫಲಾನುಭವಿಗಳಿಗೆ ಗಾಲಿ ಕುರ್ಚಿ ಮತ್ತು 28 ಫಲಾನುಭವಿಗಳಿಗೆ ಶ್ರವಣ ಸಾಧನಗಳನ್ನು ವಿತರಿಸುತ್ತಿದ್ದೇವೆಂದರು.