ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವಂತೆ ಮನವಿ

0
92
????????????????????????????????????

ಸಿರುಗುಪ್ಪ: ನಗರದ ತಾಲೂಕು ಕಚೇರಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ತಾಲೂಕು ಸಮಿತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾನ್ಯ ಪ್ರಧಾನ ಮಂತ್ರಿಯವರಿಗೆ ತಹಶಿಲ್ದಾರ್ ಎನ್.ಆರ್.ಮಂಜುನಾಥ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)ದ ಅಧ್ಯಕ್ಷೆ ಬಿ.ಉಮಾದೇವಿ ಮಾತನಾಡಿ ಕೊರೋನಾದಂತಹ ಸಂದರ್ಭಗಳಲ್ಲಿ ಮನೆ ಮನೆ ಸರ್ವೆ ನಡೆಸುವ ಅಂಗನವಾಡಿ ನೌಕರರಿಗೆ ಅಗತ್ಯ ಸುರಕ್ಷತೆಯ ಪರಿಕರಗಳು ನೀಡಿ ಸುರಕ್ಷತೆಯ ಬಗ್ಗೆ ಕ್ರಮವಹಿಸಬೇಕು ಹಾಗೂ ಕೊರೋನಾದಿಂದಾಗಿ ಸಾವನ್ನಪ್ಪಿದ ಅಂಗನವಾಡಿ ನೌಕರರಿಗೆ ಕೂಡಲೇ ಪರಿಹಾರ ನೀಡಬೇಕು, ವಿಮಾ ಸೌಲಭ್ಯವನ್ನು ೫೦ ಲಕ್ಷಕ್ಕೆ ಏರಿಸಬೇಕು, ಐ.ಸಿ.ಡಿ.ಎಸ್. ಬಲಪಡಿಸಿ ನೌಕರಿ ಖಾಯಂಗೊಳಿಸಬೇಕು, ೨೦೨೦ರ ನೂತನ ಶಿಕ್ಷಣ ನೀತಿಯನ್ನು ವಾಪಸ್ ಪಡೆಯಬೇಕು, ಐ.ಸಿ.ಡಿ.ಎಸ್. ಪಲಾನುಭವಿಗಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರವನ್ನು ದ್ವಿಗುಣಗೊಳಿಸಿ ಅಂಗನವಾಡಿ ಕಾರ್ಯಕರ್ತೆಯರ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

Previous articleನರೇಗಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗೆ ಅವಕಾಶ ಇದೆ
Next articleವರ್ಲ್ಡ್ ವಿಷನ್ ಸಂಸ್ಥೆ ವತಿಯಿಂದ ಮಕ್ಕಳ ಹಕ್ಕುಗಳ ರಕ್ಷಣೆ ಕಾರ್ಯಕ್ರಮದ ಜಾಗೃತಿ ವಾಹನಕ್ಕೆ ಸಿಇಒ ಚಾಲನೆ

LEAVE A REPLY

Please enter your comment!
Please enter your name here